ನೆಗಡಿ ಶೀತ ಕೆಮ್ಮು ಗಂಟಲು ಕಿರಿಕಿರಿ ಹಾಗೂ ಜ್ವರ ನಿವಾರಣೆಗೆ ಕಷಾಯ

ಇಂದಿನ ದಿನಗಳಲ್ಲಿ ಅಲರ್ಜಿಯಿಂದ ಆದಂತಹ ಶೀತ ಕೆಮ್ಮು ಅಥವಾ ನೆಗಡಿ ಗಳಿಗೆ ಜನರು ಮಾತ್ರೆಗಳನ್ನು ನುಂಗುತ್ತಾರೆ. ಆದರೆ ಮಾತ್ರೆಗಳನ್ನು ಹೆಚ್ಚಾಗಿ ನುಂಗುವುದರಿಂದ ನಮ್ಮ ದೇಹದಲ್ಲಿ ಇರುವಂತಹ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಆದ್ದರಿಂದ ಆದಷ್ಟು ಮಾತ್ರೆಗಳನ್ನು ನುಂಗುವುದನ್ನು ಕಡಿಮೆ ಮಾಡಿ ಇಂತಹ ಸಮಸ್ಯೆಗಳಿಗೆ ಮನೆಯಲ್ಲಿಯೇ ನಾವು ಹೇಳುವಂತಹ ಮನೆ ಮದ್ದನ್ನು ಮಾಡಿ ಉಪಯೋಗಿಸಿ. ನಿಜಕ್ಕೂ ಇದು ನಿಮಗೆ ಒಳ್ಳೆಯ ಫಲಿತಾಂಶ ನೀಡುತ್ತದೆ. ಹಾಗಾದರೆ ಈ ರೀತಿಯ ಸಮಸ್ಯೆಗಳಿಗೆ ಮನೆಯಲ್ಲಿಯೇ ಹೇಗೆ ಮನೆ ಮದ್ದನ್ನು ಮಾಡುವುದು ಅಂತ ನಾವು ನಿಮಗೆ ಹೇಳಿಕೊಡುತ್ತೇವೆ. ಸ್ನೇಹಿತರೆ ಮಾಹಿತಿ ಉಪಯುಕ್ತ ಅನ್ನಿಸಿದಲ್ಲಿ ನಿಮ್ಮ ಗೆಳೆಯರಿಗೂ ಕೂಡಾ ಮರೆಯದೆ ಶೇರ್ ಮಾಡಿ.

ನಿಮ್ಮ ಅಡುಗೆ ಮನೆಯಲ್ಲಿಯೇ ಸಿಗುವಂತಹ ಪದಾರ್ಥಗಳನ್ನು ಬಳಸಬೇಕು ನಾವು ಈ ಕಷಾಯಕ್ಕಾಗಿ. ಅದೇನೆಂದರೆ ಲವಂಗ, ಮೆಣಸು, ಯಾಲಕ್ಕಿ, ತುಳಸಿ ಎಲೆ, ಅಜ್ವೈನ್, ಶುಂಠಿ, ಬೆಲ್ಲ, ಅರಿಶಿನದ ಪುಡಿ ಮತ್ತು ಜೇನುತುಪ್ಪ.

ಲಂಗದಲ್ಲಿ ಆ್ಯಂಟಿ ಇನ್ಫ್ಲಮೇಟರಿ ಕಾರ್ಪೆಟ್ಸ್ ಗಳು ಹೆಚ್ಚಾಗಿರುವುದರಿಂದ ಗಂಟಲು ನೋವಿಗೆ ಇದು ತುಂಬಾನೇ ಉತ್ತಮ. ನೆಗಡಿ ಶೀತ ಕೆಮ್ಮು ಇದ್ದರೆ ಈ ಸಮಸ್ಯೆಯನ್ನು ದೂರ ಮಾಡುತ್ತದೆ. ಏಲಕ್ಕಿ ಕೂಡ ಶೀತಕ್ಕೆ ತುಂಬಾನೇ ಉತ್ತಮವಾದದ್ದು. ಇದರಲ್ಲಿ ಆ್ಯಂಟಿಸೆಪ್ಟಿಕ್ ಗುಣಗಳು ಇರುವುದರಿಂದ ಬೇಗಾನೆ ಕೆಮ್ಮು ಶೀತವನ್ನು ದೂರ ಮಾಡುತ್ತದೆ.

ಅಜ್ವೈನ್ ವನ್ನು ನೀವೆಲ್ಲರೂ ಕೇಳಿರುತ್ತೀರಿ. ಇದು ಕಫ ಕರಗಿಸುವುದರಲ್ಲಿ ಒಳ್ಳೆಯ ಪಾತ್ರವನ್ನು ನಿರ್ವಹಿಸುತ್ತದೆ.
ಕಾಳು ಮೆಣಸಿನಲ್ಲಿ ವಿಟಮಿನ್ ಸಿ ಇರುವುದರಿಂದ ಇದು ಮನುಷ್ಯನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮತ್ತು ಅಲರ್ಜಿಯಿಂದ ಆದಂತಹ ಕೆಮ್ಮಿಗೆ ಬೆಲ್ಲದ ಪುಡಿ ತುಂಬಾನೇ ಉತ್ತಮವಾಗಿದೆ.

ಅಲರ್ಜಿ ಶೀತವಾಗಿದ್ದರೆ ಮತ್ತು ಕೆಮ್ಮು ಶೀತದಿಂದ ಜ್ವರ ಬಂದಿದ್ದರೆ ತುಳಸಿ ಎಲೆ ಬಳಸುವುದರಿಂದ ಜ್ವರ ಬೇಗನೆ ಕಡಿಮೆಯಾಗುತ್ತದೆ.

ಈಗ ನಾವು ಹೇಳಿದಂತಹ ಕಷಾಯವನ್ನು ತಯಾರಿಸುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಮೊದಲಿಗೆ ಒಂದು ಪಾತ್ರೆಯಲ್ಲಿ ಒಂದು ಕಪ್ಪು ನೀರನ್ನು ಇಟ್ಟು ಕಾಯಿಸಬೇಕು. ಅದಕ್ಕೆ ಐದರಿಂದ ಆರು ಲವಂಗವನ್ನು ಮತ್ತು ಯಾಲಕ್ಕಿ ಮತ್ತು ಮೆಣಸು ಪುಡಿ ಮಾಡಿ ಇದಕ್ಕೆ ಹಾಕಬೇಕು. ನಂತರ ಕುದಿಸುತ್ತಾ ಇರುವಾಗಲೇ ಅದಕ್ಕೆ ತುಳಸಿ ಎಲೆಯನ್ನು ಹಾಕಬೇಕು. ಒಂದು ಟೇಬಲ್ ಸ್ಫೂನ್ ಅಜ್ವೈನ ಹಾಕಬೇಕು. ನತರ ಶುಂಠಿಯನ್ನು ಹಾಕಬೇಕು. ನಂತರ ಇದಕ್ಕೆ ಬೆಲ್ಲದ ಪುಡಿಯನ್ನು ಬೆರೆಸಬೇಕು. ಅದಕ್ಕೆ ಕಾಲು ಚಮಚ ಅರಿಶಿನದ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಬೇಕು.

ಈ ನೀರನ್ನು ಸುಮಾರು ಒಂದು ಕಪ್ಪಿನಿಂದ ಅರ್ಧ ಕಪ್ಪಿಗೆ ಬರೋ ಅಷ್ಟು ನೀರನ್ನು ಕುದಿಸಬೇಕು. ಆ ನಂತರ ಇದನ್ನು ಫಿಲ್ಟರ್ ಮಾಡಿ ಇಟ್ಟುಕೊಳ್ಳಬೇಕು. ಸ್ವಲ್ಪ ಬೆಚ್ಚಗೆ ಇದ್ದಾಗಲೇ ಕುಡಿಯಬೇಕು. ಇದನ್ನು ನೀವು ಸ್ಟೋರ್ ಕೂಡ ಮಾಡಿ ಇಡಬಹುದು.

ಸ್ನೇಹಿತರೇ ಈ ರೀತಿ ಮಾಡುವುದರಿಂದ ನಿಮಗೆ ಆಗಿರುವಂತಹ ಶೀತ ಕೆಮ್ಮು ಅಲರ್ಜಿಯಂತಹ ಶೀತ ಕಡಿಮೆಯಾಗುತ್ತದೆ ಮತ್ತು ಗಂಟಲಿನ ಸಮಸ್ಯೆ ಕೂಡ ದೂರವಾಗುತ್ತದೆ.

Facebook Comments
Related